Ticker

6/recent/ticker-posts

Advertisement

ಕಿಚ್ಚ ಸುದೀಪ್ ಅಭಿನಯದ ಪ್ಯಾಂಟಮ್ ಚಿತ್ರದಲ್ಲಿ ಕತ್ರಿನಾ ಕೈಫ್

ಕನ್ನಡ ಚಿತ್ರ ರಂಗದಲ್ಲಿ ಬಾಲಿವುಡ್  ನಟಿಯರು ಕನ್ನಡ ಚಿತ್ರದಲ್ಲಿ ನಟಿಸುವುದು ಹೊಸದೆನಲ್ಲ, ಆದರೆ ಈಗ ಮತ್ತೊಂದು ಕನ್ನಡ ಚಿತ್ರದಲ್ಲಿ ಅನೂಪ್ ಬಂಡಾರಿ ನಿರ್ದೇಶನದ  ಕಿಚ್ಚ ಸುದೀಪ್ ಅಭಿನಯದ ಪ್ಯಾಂಟಮ್ ಚಿತ್ರದಲ್ಲಿ ವಿಕ್ರಾಂತ ರೋಣ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Katrina Kaif act in Kannada film


ಈಗಾಗಲೇ ಹೈದರಾಬಾದನಲ್ಲಿ ಬೃಹತ ಮೊತ್ತದ ಕಾಡಿನ ಸೆಟ್ ಹಾಕಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ, 2 ನೇ ಷೆಡ್ಯೂಲ್ ಚಿತ್ರೀಕರಣ ಪೂರ್ಣಗೊಂಡಿದೆ ಇನ್ನೂ 3 ನೇ ಷೆಡ್ಯೂಲನ ಚಿತ್ರಕರಣ ಡಿಸೆಂಬರ್ ಮೊದಲನೇ ವಾರದಿಂದ 30 ದಿನಗಳವರೆಗೆ ಕೇರಳದಲ್ಲಿ  ಚಿತ್ರೀಕರಣ ನಡೆಯಲಿದೆ, ಈ ಚಿತ್ರದ ಒಂದು ಪ್ರಮುಖ ಹಾಡಿಗೆ ನೃತ್ಯ ಮಾಡಲು ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಅಥವಾ ನೋರಾ ಫತೇಹಿ ಅವರನ್ನು ಕರೆತರಲು ಚಿತ್ರ ತಂಡ ನಿರ್ದರಿಸಿದೆ, ಈಗಾಗಲೇ ಚಿತ್ರ ತಂಡ ಕತ್ರಿನಾ ಕೈಫ ಅವರನ್ನು ಸಂಪರ್ಕಿಸಿದೆ. ಆದರೆ ಅವರಿಂದ ಯಾವುದೇ ಅದಿಕೃತ ಮಾಹಿತಿ ದೊರೆತಿಲ್ಲ, 

ಒಂದು ವೇಳೆ ಕತ್ರಿನಾ ಕೈಫ ಅವರಿಗೆ  ಯಾವುದೇ  ಚಿತ್ರೀಕರಣ ಡೇಟ್ಸ್ ಸಮಸ್ಯೆ ಬರದಿದ್ದರೆ ಪ್ಯಾಂಟಮ್ ಚಿತ್ರದಲ್ಲಿ ನಟಿಸುವುದು ಖಚಿತ. ಇಲ್ಲವಾದರೇ ಬಾಲಿವುಡನ ಇನ್ನೋರ್ವ ನಟಿ  ನೋರಾ ಫತೇಹಿ ಅವರನ್ನು ಚಿತ್ರದಲ್ಲಿ ನಟಿಸಲು ಚಿತ್ರತಂಡ ಅವರನ್ನು ಸಂಪರ್ಕಿಸಲಿದೆ. 


ಪ್ಯಾಂಟಮ್ ಚಿತ್ರ ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಚಿತ್ರವಾಗಲಿದೆ ಹಾಗೂ ಕಿಚ್ಚ ಸುದೀಪ್ ಅವರು ಮೂರನೇ ಷೆಡ್ಯೂಲ್ ಚಿತ್ರೀಕರಣಕ್ಕಾಗಿ ವರ್ಕೌಟ್ ಕೂಡ ಮಾಡಲಿದ್ದಾರೆ, ಕತ್ರಿನಾ ಕೈಫ ಅವರು ಸಲ್ಮಾನ ಖಾನ್ ಅವರಿಗೆ ಆಪ್ತರಾಗಿರುವಾದರಿಂದ ಕಿಚ್ಚ ಸುದೀಪ್ ಅವರು ಸಲ್ಮಾನ್ ಖಾನ ಅವರಿಗೆ ಆತ್ಮೀಯರಾಗಿರುವುದರಿಂದ ಕತ್ರಿನಾ ಕೈಫ ಈ ಚಿತ್ರದಲ್ಲಿ ನಟಿಸುವುದು ಖಚಿತ ಎಂದು ಚಿತ್ರತಂಡ ಅಭಿಮಾನಿಗಳಿಗೆ ಭರವವಸೆ ನೀಡಿದೆ. 


ಕಳೆದ ತಿಂಗಳಲ್ಲಿ ಹೈದರಾಬಾದನಲ್ಲಿ ಸುಮಾರು 6 ಕೋಟಿ ರೂ. ಗಳ ಬೃಹತಾಕಾರದ ಕಾಡಿನ ಸೆಟ್ ಒಂದನ್ನು ಹಾಕಿ ಚಿತ್ರೀಕರಣ ಮಾಡಲಾಗಿದೆ, ಈ ಸೆಟ್ ನಲ್ಲಿ ಹಾಕಲಾದ ವಸ್ತುಗಳನ್ನು ಚಿತ್ರೀಕರಣ ಪೂರ್ಣಗೊಂಡ ನಂತರ ಬೆಂಗಳೂರಿನ ಇನ್ನೋವೇಟಿವ್ ಫಿಲ್ಮ್ ಸೀಟಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ. 


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು