Ticker

6/recent/ticker-posts

Advertisement

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮುಂಬರುವ ಕನ್ನಡ ಚಿತ್ರ "ಜೇಮ್ಸ್" ಚಿತ್ರದ ಬಗ್ಗೆ ಮಾಹಿತಿ.

ಜೇಮ್ಸ್ ಚಿತ್ರದ ಕುರಿತು ಒಂದಿಷ್ಟು ಮಾಹಿತಿ.

James Kannada movie Poster


ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಮುಂಬರಲಿರುವ ಬಹುನಿರೀಕ್ಷಿತ ಚಿತ್ರ ಜೇಮ್ಸ್ 

ಹೌದು ಪುನೀತ ರಾಜಕುಮಾರ್ ನಟನೆಯ ಯುವರತ್ನ ಹಾಗೂ ಜೇಮ್ಸ್ ಚಿತ್ರಗಳು ಕೋವಿಡ-19 ಕಾರಣದಿಂದಾಗಿ ಚಿತ್ರದ ಚಿತ್ರೀಕರಣ ನಿಂತು ಹೋಗಿತ್ತು ಇದು ಕನ್ನಡದ ಚಿತ್ರರಸಿಕರಿಗೆ ಬೇಸರದ ಸಂಗತಿ ಆಗಿತ್ತು, ಆದರೆ ಈಗ ಜೇಮ್ಸ್ ಚಿತ್ರ ತಂಡದಿಂದ ಒಂದು ಖುಷಿ ಪಡುವ ವಿಷಯ ತಿಳಿದು ಬಂದಿದೆ. 

ಅದು ಚಿತ್ರದ ಮೊದಲನೇ ಚಿತ್ರೀಕರಣ ಶೆಡ್ಯೂಲ್ ಪೂರ್ಣಗೊಂಡಿದೆ, ಮತ್ತು ಅಕ್ಟೋಬರ್ 14 ರಿಂದ ಚಿತ್ರದ ಎರಡನೇ ಚಿತ್ರೀಕರಣದ ಶೆಡ್ಯೂಲ್ ಆರಂಭಗೊಂಡಿದೆ. ಈಗಾಗಲೇ ಜೇಮ್ಸ ಚಿತ್ರತಂಡ ಹಂಪಿಯ ಸುತ್ತಮುತ್ತಲಿನ ಪ್ರದಶಗಳಲ್ಲಿ ಚಿತ್ರೀಕರಣಕ್ಕಾಗಿ ಹಂಪಿಯಲ್ಲಿ ಚಿತ್ರತಂಡ  ವಾಸ್ತವ್ಯ ಹೂಡಿದೆ. ಎಲ್ಲಾ ಅಂದುಕೊಂಡ ಹಾಗೆ ಆಗಿದ್ದರೆ ಇಷ್ಟೊತ್ತಿಗೆ ಜೇಮ್ಸ ಚಿತ್ರ ತೆರೆ ಕಾಣಬೇಕಿತ್ತು, ಆದರೆ ಎಲ್ಲಾ ಕೋವಿಡ 19 ಮಹಾಮಾರಿಯ ಕಾರಣ.

ಈ ಚಿತ್ರವನ್ನು ಬಹದ್ದೂರ್, ಭರ್ಜರಿ ಮತ್ತು ಭರಾಟೆ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಚೇತನ್ ಕುಮಾರ್ ಅವರು ಈ ಚಿತ್ರಕ್ಕೆ ಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಾಗೂ ಕಿಶೋರ ಪಾತಿಕೊಂಡ ಅವರು ಜೇಮ್ಸ್ ಚಿತ್ರಕ್ಕೆ ಬಂಡವಾಳ ಹಾಕಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ, ಈ ಚಿತ್ರವನ್ನು ಕಿಶೋರ್ ಪಾತಿಕೊಂಡ ಅವರು ತಮ್ಮದೇ ಬ್ಯಾನರ್ ಆದ ಕಿಶೋರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಜೇಮ್ಸ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾಗಿ ಪ್ರಿಯಾ ಆನಂದ ಅವರು ನಟಿಸುತ್ತಿದ್ದಾರೆ, ಹಾಗೂ ಮೊದಲು ಈ ಚಿತ್ರಕ್ಕೆ ನಾಯಕಿಯಾಗಿ ನಿಧಿ ಅಗರ್ವಾಲ್ ಅವರನ್ನು ಆಯ್ಕೆ ಮಾಡಲಾಗಿತ್ತು ಆದರೆ ನಿಧಿ ಅಗರ್ವಾಲ್ ಅವರ ಚಿತ್ರೀಕರಣದ ದಿನಾಂಕದ ಸಮಸ್ಯೆಯಿಂದ ಚಿತ್ರದಿಂದ ಕೈ ಬಿಡಲಾಯಿತು.

ಮತ್ತು ಚಿತ್ರಕ್ಕೆ ನಾಯಕಿಯಾಗಿ ಮಂಗಳೂರಿನ ಮೂಲದ  ಬೇರೆ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಮ್ಮ ಕನ್ನಡತಿ ಪೂಜಾ ಹೆಗ್ಡೆ ಅವರನ್ನು ಚಿತ್ರತಂಡ ಸಂಪರ್ಕಿಸಿದಾಗ ಅವರು ಕೂಡ ಪ್ರಭಾಸ್ ಅಭಿನಯಿಸುತ್ತಿರುವ ರಾದೆ ಶ್ಯಾಮ ಚಿತ್ರದಲ್ಲಿ ಬ್ಯುಜಿಯಾಗಿರುವ ಕಾರಣ ಅವರು ಕೂಡ ಜೇಮ್ಸ್ ಚಿತ್ರದಿಂದ ಹೊರ ನಡೆದರು. ಅಂತಿಮವಾಗಿ ಪುನೀತ ರಾಜಕುಮಾರ್ ಅಭಿನಯದ "ರಾಜಕುಮಾರ್" ಚಿತ್ರದಲ್ಲಿ  ಅಪ್ಪುಗೆ ಜೋಡಿಯಾಗಿದ್ದ ಪ್ರಿಯಾ ಆನಂದ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಶ್ರೀಕಾಂತ, ಆದಿತ್ಯ ಮೆನನ್, ಹಾಗೂ ಅನುಪ್ರಭಾಕರ್ ಅವರು ನಟಿಸುತ್ತಿದ್ದಾರೆ, ಮತ್ತು ಜೇಮ್ಸ್ ಚಿತ್ರಕ್ಕೆ ಚರಣ್ ರಾಜ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು