Ticker

6/recent/ticker-posts

Advertisement

ಕನ್ನಡದ ಬಿಗ್ ಬಾಸ್ ಸೀಸನ್ 8 | ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ ಆರಂಭ.

ಕನ್ನಡ ಬಿಗ್ ಬಾಸ್ ಸೀಸನ್ 8

ಕಲರ್ಸ್ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡಿಗರ ಮನ ಗೆದ್ದ ಕಾರ್ಯಕ್ರಮ ಬಿಗ್ ಬಾಸ್, ಕಳೆದ 7 ಆವೃತ್ತಿಗಳ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿಯಾಗಿ ತೆರೆಕಂಡು ಸಾಕಷ್ಟು ಅಭಿಮಾನಿಗಳನ್ನು ಗಳಿಸಿದೆ.

Kannada BiggBoss 8

ಹಾಲಿವುಡನ ಬಿಗ್ ಬ್ರದರ್ ರಿಯಾಲಿಟಿ ಶೋನ ಕನ್ನಡದ ಅವತರಣಿಕೆ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ ಆಗಿದೆ, ಕನ್ನಡದ ಈ ರಿಯಾಲಿಟಿ ಶೋ ಅನ್ನು ಎಂಡೆಮಾಲ್ ಶೈನ್ ಇಂಡಿಯಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುವುದು ನಮಗೆಲ್ಲ ತಿಳಿದ ವಿಷಯ, ಈಗಾಗಲೇ ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭಗೊಂಡಿವೆ ಹಾಗೂ ಯಶಸ್ಸನ್ನೂ ಕೂಡ  ಕಂಡಿವೆ.

ಆದರೆ ಈ ವರ್ಷದ ಕನ್ನಡ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ  ಕಾರ್ಯಕ್ರಮ ಸ್ವಲ್ಪ ತಡವಾಗಿ ಬರುತ್ತಿದೆ, ಕಳೆದ ಆಕ್ಟೋಬರ್ ತಿಂಗಳಲ್ಲಿ ಪ್ರಸಾರವಾಗಬೇಕಿದ್ದ ಕಾರ್ಯಕ್ರಮ covida - 19 ಅಟ್ಟಹಾಸದಿಂದ ಮುಂದಿನ ವರ್ಷ ಅಂದರೆ 2021 ರ ಸಂಕ್ರಾಂತಿ ಹಬ್ಬಕ್ಕೆ  ಪ್ರಸಾರ ಮಾಡುವುದಾಗಿ ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸೀಸನ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಒಟ್ಟು 15 ಸ್ಪರ್ಧಿಗಳು ಇರಲಿದ್ದಾರೆ ಮತ್ತು ಎಲ್ಲ ಸೆಲೆಬ್ರಿಟಿ ಸ್ಪರ್ಧಿಗಳಗಿರುತ್ತಾರೆ  ಈ ಬಾರಿಯು ಯಾವುದೇ ಕಾಮನ್ ಮ್ಯಾನ್ ಸ್ಪರ್ಧಿಗೆ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಇರುವದಿಲ್ಲ.

ಕನ್ನಡ ಬಿಗ್ ಬಾಸ್ ಸೀಸನ್ 8

ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಹೇಳಿದ ಹಾಗೆ ಬಿಗ್ ಬಾಸ್ ಮನೆಯ ರಿಪೇರಿ ಹಾಗೂ ಕ್ಯಾಮೆರಾ ಅಳವಡಿಸುವ ಮತ್ತು ಬಿಗ್ ಬಾಸ್ ಮನೆಯ ವಿನ್ಯಾಸವನ್ನು ಬದಲಿಸುವ ಕೆಲಸಗಳು ಬಾಕಿ ಇವೆ ಆದ ಕಾರಣ ಈ ಬಾರಿ ಕನ್ನಡ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ ಸ್ವಲ್ಪ ತಡವಾಗಿ ಬರುತ್ತಿದೆ.

ಬಿಗ್ ಬಾಸ್ ನ ಒಂದು ತಂಡ  ಬಿಗ್ ಬಾಸ್ ಮನೆಯ ವಿನ್ಯಾಸ ಮತ್ತು ಇತರೆ ಅಭಿವೃದ್ಧಿ ಕೆಲಸಗಳಲ್ಲಿ ತಂಡ ಸಂಪೂರ್ಣ ಜವಾಬ್ದಾರಿ ಪಡೆದುಕೊಂಡಿವೆ, ಹಾಗೂ ಇನ್ನೊಂದು ತಂಡ ಸ್ಪರ್ಧಿಗಳ ಹುಡುಕಾಟ ಮತ್ತು ಸ್ಪರ್ಧಿಗಳ ಆಯ್ಕೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ, ಇನ್ನು ಈ ಬಾರಿ ಯಾವೆಲ್ಲ ಸೆಲೆಬ್ರಿಟಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. 

ಕಳೆದ 7 ಸೀಸನಗಳನ್ನು ನಿರೂಪಣೆ ಮಾಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಸೀಸನ್ ಅನ್ನು ಕೂಡ ಅವರೇ ನಿರೂಪಣೆ ಮಾಡಲಿದ್ದಾರೆ, 7 ಸೀಸನಗಳು ಯಶಸ್ಸನ್ನೂ ಕಂಡಿವೆ ಇದಕ್ಕೆ ಕಾರಣ ಕನ್ನಡಿಗರು ಮತ್ತು ಕಾರ್ಯಕ್ರಮವನ್ನು  ನಿರೂಪಣೆ ಮಾಡುವ ಕಿಚ್ಚ ಸುದೀಪ್ ಅವರು, ಸುದೀಪ್ ಅವರು ಶೋ ಅನ್ನು ನಡೆಸಿಕೊಡುವ ವೈಖರಿ ಮತ್ತು ಅವರ ಮಾತನಾಡುವ ಶೈಲಿ ಕನ್ನಡಿಗರ ಮನ ಗೆದ್ದಿದೆ. ಈಗಾಗಲೇ ಕಿಚ್ಚ ಸುದೀಪ ಅವರ ಅಭಿನಯದ ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ, ಮತ್ತು ಚಿತ್ರ ಯಾವಾಗ ತೆರೆಗೆ ಅಪ್ಪಳಿಸಲಿದೆ ಎಂದು ತಿಳಿದಿಲ್ಲ, ಹಾಗೂ ಅವರ ಅಭಿನಯದ ಇನ್ನೊಂದು ಚಿತ್ರ ಫ್ಯಾಂಟಮ್ ಇದರ ಚಿತ್ರೀಕರಣ ಇನ್ನು ಪೂರ್ಣಗೊಂಡಿಲ್ಲ ಇದರ ನಡುವೆ ಅವರು ಕನ್ನಡ ಬಿಗ್ ಬಾಸ್ 8 ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಲಿದ್ದಾರೆ, 

ಕಳೆದ ಬಿಗ್ ಬಾಸ್ ಆವೃತ್ತಿಗಳ ವಿನ್ನರ್ ಮತ್ತು ರನ್ನರ್ ಅಪ್ ಸ್ಪರ್ಧಿಗಳು.


ಮೊದಲನೇ ಸೀಸನ್

ವಿನ್ನರ್ - ವಿಜಯ ರಾಘವೇಂದ್ರ

ರನ್ನರ್ ಅಪ್ - ಅರುಣ ಸಾಗರ


ಎರಡನೇ ಸೀಸನ್

ವಿನ್ನರ್ - ಅಕುಲ್ ಬಾಲಾಜಿ

ರನ್ನರ್ ಅಪ್ - ಸೃಜನ್ ಲೋಕೇಶ್


ಮೂರನೇ ಸೀಸನ್

ವಿನ್ನರ್ - ಶೃತಿ 

ರನ್ನರ್ ಅಪ್ - ಚಂದನ ಕುಮಾರ್


ನಾಲ್ಕನೇ ಸೀಸನ್

ವಿನ್ನರ್ - ಪ್ರತಾಪ

ರನ್ನರ್ ಅಪ್ - ಕಿರಿಕ್ ಕೀರ್ತಿ 


ಐದನೇ ಸೀಸನ್

ವಿನ್ನರ್ - ಚಂದನ ಶೆಟ್ಟಿ

ರನ್ನರ್ ಅಪ್ - ದಿವಾಕರ್


ಆರನೇ ಸೀಸನ್

ವಿನ್ನರ್ - ಶಶಿ ಕುಮಾರ್

ರನ್ನರ್ ಅಪ್ - ನವೀನ್ ಸಜ್ಜು


ಏಳನೇ ಸೀಸನ್

ವಿನ್ನರ್ - ಶೈನ್ ಶೆಟ್ಟಿ

ರನ್ನರ್ ಅಪ್ - ಕುರಿ ಪ್ರತಾಪ್



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು