Ticker

6/recent/ticker-posts

Advertisement

ಕಿಚ್ಚ ಸುದೀಪ್ ಅವರ ಮುಂಬರುವ ಕನ್ನಡ ಯೋಜನೆಗಳು ಕೋಟಿಗೊಬ್ಬ 3 | ಫ್ಯಾಂಟಮ್ | ಕನ್ನಡ ಬಿಗ್ ಬಾಸ್ ಸೀಸನ್ 8 ಬಗ್ಗೆ ವಿವರಣೆ .

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಮಾನಿಗಳಿಗೆ ಸಂತಸದ ಸುದ್ದಿ..!

ಅಭಿನಯ ಚಕ್ರವರ್ತಿ, ಕನ್ನಡದ ಬಾದಷಾ ಕಿಚ್ಚ ಸುದೀಪ್ ಅವರು  ಅಭಿನಯಿಸಿರುವ ಮುಂಬರುವ ಬಹು ನಿರೀಕ್ಷಿತ ಚಿತ್ರ ಗಳು ಕೋಟಿಗೊಬ್ಬ 3 ಮತ್ತು ಫ್ಯಾಂಟಮ್ ಚಿತ್ರಗಳ ಕುರಿತು ಅಧಿಕೃತ ಮಾಹಿತಿ ಒಂದು ಹೊರಬಂದಿದೆ.

Kotigobba 3

ಕಿಚ್ಚ ಸುದೀಪ್ ಅವರು ಕನ್ನಡ ಸಿನೆಮಾಗಳಲ್ಲದೆ ತೆಲುಗು, ತಮಿಳು ಮತ್ತು ಹಿಂದಿ ಪರ ಭಾಷೆಗಳಲ್ಲಿ ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸಿ ಸೈ ಎನಿಸಿಕೊಂಡ ಕಿಚ್ಚ ಸುದೀಪ್ ತಮ್ಮ ಅದ್ಭುತವಾದ ನಟನೆಯಿಂದ ದೇಶ್ಯಾಂದಾತ ಅಭಿಮಾನಿಗಳನ್ನು ಹೊಂದಿದ್ದಾರೆ, ಹೀಗಿರುವಾಗ ಕನ್ನಡದ ಸಾಲು ಸಾಲು ಚಿತ್ರಗಳಲ್ಲಿ ಸುದೀಪ್ ಅವರ ನಟಿಸುತ್ತಿದ್ದಾರೆ ಮತ್ತು ಕಿರುತೆರೆಯಲ್ಲಿ ಕೂಡಾ ಅಷ್ಟೇ ಸಕ್ರಿಯರಾಗಿದ್ದಾರೆ. ಮತ್ತು ಕಿಚ್ಚ ಸುದೀಪ್ ಅವರು  ನಿರೂಪಣೆಯಲ್ಲಿ ಮೂಡಿಬರುವ ಕನ್ನಡಿಗರ ಮನ ಗೆದ್ದ ಬಿಗ್ ಬಾಸ್ ಕಾರ್ಯಕ್ರಮ ಇದೆ ವರ್ಷ ಅಕ್ಟೋಬರ ತಿಂಗಳಲ್ಲಿ ಅರಂಭಗೊಳ್ಳಬೇಕಿತ್ತು ಆದರೆ Covid-19 ಅಟ್ಟಹಾಸದಿಂದ ಅದು ಕೂಡಾ ಮುಂದಿನ ವರ್ಷ ಜನೇವರಿ 2021 ಆರಂಭಗೊಳ್ಳಲಿದೆ, ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ, ಇದಲ್ಲದೆ ಸುದೀಪ್ ಅವರು ಕನ್ನಡ ಚಿತ್ರದ ಚಿತ್ರೀಕರಣದಲ್ಲಿ ಕೂಡಾ ಸಕ್ರಿಯರಾಗಿದ್ದಾರೆ, ಅವರ ಮುಂಬರುವ ಚಿತ್ರಗಳ ಕುರಿತು ಒಂದಿಷ್ಟು ಮಾಹಿತಿಗಳು ನಮಗೆ ಲಭ್ಯವಾಗಿವೆ.

ಕೋಟಿಗೊಬ್ಬ 3 ಚಿತ್ರವು 2016 ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2 ಚಿತ್ರದ ಸೀಕ್ವೆಲ್ ಚಿತ್ರ ಇದಾಗಿದೆ, ನಿರ್ದೇಶಕ ಶಿವ ಕಾರ್ತಿಕ್ ಕೋಟಿಗೊಬ್ಬ 3 ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಹಾಗೂ ಈ ಚಿತ್ರವನ್ನು ನಿರ್ಮಾಪಕ ಸೂರಪ್ಪ ಬಾಬು ಅವರು ಅವರದೇ ನಿರ್ಮಾಣ ಸಂಸ್ಥೆಯಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2 ಚಿತ್ರವನ್ನು ಖ್ಯಾತ ನಿರ್ದೇಶಕ ಕೆ ಎಸ್ ರವಿಕುಮಾರ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದರು ಹಾಗೂ ಈ ಚಿತ್ರವನ್ನು ಕನ್ನಡ ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿ ಮತ್ತು ಅವರದೇ ನಿರ್ಮಾಣ ಸಂಸ್ಥೆಯಾದ ರಾಕ್ಲೈನ್ ಪ್ರೊಡಕ್ಷನ್ಸ್ ಬ್ಯಾನರನಲ್ಲಿ ಬಿಡುಗಡೆ ಮಾಡಿದ್ದರು, ಮತ್ತು ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ನಿತ್ಯ ಮೆನನ್ ಅವರು ನಟಿಸಿದ್ದರು, ಜೊತೆಗೆ ಖಳನಾಯಕನ ಪಾತ್ರದಲ್ಲಿ ಆರ್ಮುಘ ಪಿ. ರವಿಶಂಕರ್ ಅವರು ನಟಿಸಿದ್ದರು ಮತ್ತು ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ರಾಜ್, ಅವಿನಾಶ್, ಆಚುತ್ ಕುಮಾರ್, ನಾಸರ್, ಹಾಗೂ ಕಾಮಿಡಿ ಪಾತ್ರದಲ್ಲಿ ಚಿಕ್ಕಣ್ಣ ನಟಿಸಿದ್ದರು. ಮತ್ತು ಡಿ. ತಮನ್ ಅವರು ಸಂಗೀತ ಸಂಯೋಜನೆ ಮಾಡಿದ್ದರು, ಹಾಗೂ ಈ ಚಿತ್ರವನ್ನು ಕನ್ನಡ ಮತ್ತು ತಮಿಳು ಅವತರಣಿಕೆಯಲ್ಲಿ ಬಿಡುಗಡೆ ಮಾಡಲಾಗಿತ್ತು,  ಮತ್ತು ಕೋಟಿಗೊಬ್ಬ 2 ಚಿತ್ರವು ಕೂಡ ಸೂಪರ್ ಹಿಟ್ ಆಗಿತ್ತು.

Kannada Bigg Boss season 8

ಇನ್ನು ಕೋಟಿಗೊಬ್ಬ 3 ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಮಲಯಾಳಂ ನ ಖ್ಯಾತ ನಟಿ   ಮಡೋನಾ ಸೆಬಾಸ್ಟಿಯನ್ ನಟಿಸುತ್ತಿದ್ದಾರೆ, ಹಾಗೂ ಪ್ರಮುಖ ಪಾತ್ರಗಳಲ್ಲಿ ಶ್ರದ್ಧಾ ದಾಸ್, ಪಿ. ರವಿಶಂಕರ್ ಹಾಗೂ ಬಾಲಿವುಡ್ ನಟ ಅಫ್ತಾಬ್ ಶಿವ್ದಾಸನಿ ಮತ್ತು ನವಾಬ್ ಶಾ ನಟಿಸುತ್ತಿದ್ದಾರೆ, ಈ ಚಿತ್ರಕ್ಕೆ ಕನ್ನಡ ಮ್ಯೂಸಿಕ್ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಇದೆ. ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣವೂ ಸಂಪೂರ್ಣವಾಗಿ ಪೂರ್ಣಗೊಂಡಿದ್ದು ಇನ್ನು ಭಾಕಿ ಉಳಿದ ಡಬ್ಬಿಂಗ್ ಮತ್ತು ಇನ್ನಿತರ ಕೆಲಸಗಳು ಪೂರ್ಣಗೊಳ್ಳಬೇಕಿದೆ.  

ಈ ಚಿತ್ರ ಇದೇ ವರ್ಷದ ಅಂತ್ಯಕ್ಕೆ 2020 ಡಿಸೆಂಬರ್ 31 ಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇನ್ನು ಕಿಚ್ಚ ಸುದೀಪ್ ಅಭಿನಯದ ಇನ್ನೊಂದು ಚಿತ್ರ ಪ್ಯಾಂಟಮ, ಈ ಚಿತ್ರವನ್ನು ನಿರ್ದೇಶಕ ಅನೂಪ್ ಭಂಡಾರಿ ಅವರು ಚಿತ್ರದ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ಜೊತೆಗೆ ಮಂಜುನಾಥ ಗೌಡ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ, ಇತ್ತೀಚಿಗಷ್ಟೇ ಹೈದರಾಬಾದನಲ್ಲಿ ಅದ್ಧೂರಿ ಕಾಡಿನ ಸೆಟ್ ಅನ್ನು ಹಾಕಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ ಹಾಗೂ ಅರ್ಧದಷ್ಟು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ, ಇನ್ನು ಉಳಿದ ಬಾಕಿ ಇರುವ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳ್ಳುವವೆಗೂ ಕಿಚ್ಚ ಸುದೀಪ್ ಅಭಿಮಾನಿಗಳು ಕುತೂಹಲದಿಂದ ಕಾಯಬೇಕಿದೆ. ಈ ಚಿತ್ರದಲ್ಲಿ ಕಿಚ್ಚನಿಗೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಹಾಗೂ ಈ ಚಿತ್ರದಲ್ಲಿ ನಟಿಸುವ ಇನ್ನುಳಿದ ಕಲಾವಿದರ ಮತ್ತು ಸಂಗೀತ ನಿರ್ದೇಶಕ ಯಾರು ಎಂದು ಯಾವುದೇ ಅಧಿಕೃತ ಮಾಹಿತಿ ಪ್ಯಾಂಟಮ ಚಿತ್ರತಂಡದಿಂದ ಬಹಿರಂಗಗೊಂಡಿಲ್ಲ.  

ಈ ಚಿತ್ರ  ಮುಂದಿನ ವರ್ಷ 2021 ಯುಗಾದಿ ಹಬ್ಬಕ್ಕೆ ತೆರೆಗೆ ಬರುವ ನಿರಿಕ್ಷೆಯಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು