Ticker

6/recent/ticker-posts

Advertisement

ಸ್ಯಾಮ್ಸಂಗ್ ಕಂಪನಿ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ M12

ಸೌತ್ ಕೊರಿಯಾ ಟೆಕ್ ದೈತ್ಯ ಸ್ಯಾಮ್ಸಂಗ್ ಕಂಪನಿಯು ಪ್ರಸ್ತುತ ದಿನಗಳಲ್ಲಿ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಬೆಲೆಯ ಸ್ಮಾರ್ಟ್ ಫೋನಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಿದೆ, ಹೀಗಿರುವಾಗ ಸ್ಯಾಮ್‌ಸಂಗ್ ಕಂಪೆನಿಯು ಈಗ ತನ್ನ ಹೊಸ ಫೋನ್ ಅನ್ನು ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ, ಅದುವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಫೋನ ಸ್ಮಾರ್ಟ್‌ಫೋನ್ ಅನ್ನು ಎಕ್ಸಿನೋಸ್ 850 SoC ನಿಂದ ನಿಯಂತ್ರಿಸಬಹುದೆಂದು ಊಹಿಸಲಾಗಿದೆ, 
ನಿರೀಕ್ಷೆ ಮಾಡಲಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ವಿಶೇಷಣಗಳು.
ಸ್ಯಾಮ್‌ಸಂಗ್ M12 ಫೋನ್ ಎಕ್ಸಿನೋಸ್ 850 SoC ಪ್ರೊಸೆಸರ್ ಚೀಪ್ ಸೆಟ್ ಅನ್ನು ಅಳವಡಿಸಲಾಗಿದೆ, ಮತ್ತು 3GB RAM + 64GB ಆಂತರಿಕ ಮೆಮೋರಿ ಸಂಗ್ರಹಣಾ ಸಾಮರ್ಥ್ಯ ಹೊಂದಿರಬಹುದು ಎಂದು ಹೇಳಲಾಗುತ್ತಿದೆ, ಮತ್ತು ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M12, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ, ಹಾಗೂ ಟ್ರಿಪಲ್ ರಿಯರ್ ಕ್ಯಾಮೆರಾ ವಿನ್ಯಾಸದೊಂದಿಗೆ ನಿರ್ಮಿತವಾಗಿದೆ, ಲೀಕ್ ಆದ ಸ್ಯಾಮ್ಸಂಗ್ ಗ್ಯಾಲಕ್ಸಿ M21 ಸ್ಮಾರ್ಟ್ಫೋನ್ ಚಿತ್ರಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ ಹೊಂದಿರಬಹುದು ಹಾಗೂ ಫೋನ್‌ ವಾಟರ್‌ಡ್ರಾಪ್-ಶೈಲಿಯ ಡಿಸ್ಪ್ಲೇ ವಿನ್ಯಾಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M12 6.7 ಇಂಚಿನ ಪೂರ್ಣ ಪ್ರಮಾಣದ ಡಿಸ್ಪ್ಲೇ ಹಾಗೂ ಸುಮಾರು 7,000 ಎಮ್‌ಎಹೆಚ್ ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದ್ದು, ಫೋನ್ 2021 ಜನೆವರಿ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು