Ticker

6/recent/ticker-posts

Advertisement

ಭಾರತದಲ್ಲಿ ಬಿಡುಗಡೆಯಾದ ಮೋಟೋ G9 ಪವರ್ ಸ್ಮಾರ್ಟ್ ಫೋನಿನ ವಿಶೇಷತೆಗಳು, ಬೆಲೆ ಮತ್ತು ಲಭ್ಯತೆ.

ಮೋಟೋ G9 ಪವರ್ ಸ್ಮಾರ್ಟ್ ಫೋನ್. 

ಮುಖ್ಯಾಂಶಗಳು.
  1. ಮೋಟೋ G9 ಪವರ್ ಫೋನಿನ ಬೆಲೆ ಸುಮಾರು 11,999 ರೂ.ಗಳು.
  2. 6,000 ಎಮ್ಎಹೆಚ್ ಬ್ಯಾಟರಿ ಬ್ಯಾಕಪ್ ಸಂಗ್ರಹಣಾ ಸಾಮರ್ಥ್ಯ.
  3. ಮೋಟೋ G9 ಪವರ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 662 SoC ಪ್ರೊಸೆಸರ್ ಅನ್ನು ಹೊಂದಿದೆ.

ಚೀನಾ ಮೂಲದ ಟೆಕ್ ದೈತ್ಯ ಲೆನೊವೊ ಒಡೆತನದ ಮೊಟೊರೊಲಾ ಕಂಪನಿಯು ಮೋಟೋ G9 ಪವರ್ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ 6,000 ಎಮ್ಎಹೆಚ್ ಬ್ಯಾಟರಿ ಬ್ಯಾಕಪ್ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಮೋಟೋ ಜಿ 9 ಪವರ್ ಪಂಚ್- ಹೋಲ್ ಡಿಸ್ಪ್ಲೇ  ಹಾಗೂ ಟ್ರಿಪಲ್ ರಿಯರ್ ಕ್ಯಾಮೆರಾ      ವಿನ್ಯಾಸದೊಂದಿಗೆ ನಿರ್ಮಿತವಾಗಿದೆ. G9 ಪವರ್ ಸ್ಮಾರ್ಟ್ಫೋನ್ ಎರಡು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ, ಮತ್ತು ಐಪಿ 52-ರೇಟೆಡ್ ನೀರು - ನಿರೋಧಕ ಸಾಮರ್ಥ್ಯ ಹೊಂದಿದೆ,  

ಭಾರತದಲ್ಲಿ ಮೋಟೋ G9 ಪವರ್ ಬೆಲೆ, ಲಭ್ಯತೆ.

ಭಾರತದಲ್ಲಿ ಮೋಟೋ G9 ಪವರ್ ಸ್ಮಾರ್ಟ್ ಫೋನಿನ ಬೆಲೆ 4GB RAM + 128GB ಇಂಟರ್ನಲ್ ಸ್ಟೋರೇಜ್ ಮಾದರಿ ಫೋನಿನ ಬೆಲೆ  11,999 ರೂ.ಗಳು ಈ ಫೋನ್ ಗ್ರಾಹಕರಿಗೆ ಎರಡು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ ಎಲೆಕ್ಟ್ರಿಕ್ ವೈಲೆಟ್ ಮತ್ತು ಮೆಟಾಲಿಕ್ ಸೇಜ್, ಇದು ಇ- ಕಾಮರ್ಸ್ ದೈತ್ಯ ಶಾಪಿಂಗ್ ತಾಣವಾದ ಫ್ಲಿಪ್ ಕಾರ್ಟನಲ್ಲಿ ಡಿಸೆಂಬರ್ 15 ರಿಂದ ಮಾರಾಟ ಆರಂಭವಾಗಲಿದೆ.

ಮೋಟೋ ಜಿ 9 ಪವರ್ ವಿಶೇಷಣಗಳು.

ಮೋಟೋ G9 ಪವರ್ ಡ್ಯುಯಲ್ ಸಿಮ್ (ನ್ಯಾನೋ) ಸಿಮ್ ಆಯ್ಕೆಯಲ್ಲಿ ದೊರೆಯಲಿದೆ, ಮೋಟೋ ಜಿ 9 ಪವರ್ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸುತ್ತದೆ, ಮತ್ತು ಪೂರ್ಣ ಪ್ರಮಾಣದ 6.8-ಇಂಚಿನ ಎಚ್‌ಡಿ + (720x1,640 ಪಿಕ್ಸೆಲ್‌ಗಳು) ಐಪಿಎಸ್ ಡಿಸ್ಪ್ಲೇಯನ್ನು ಹೊಂದಿದೆ ಜೊತೆಗೆ 20.5: 9  ಅನುಪಾತದಲ್ಲಿ ಡಿಸ್ಪ್ಲೇ ಆಕಾರವನ್ನು ವಿನ್ಯಾಗೊಳಿಸಲಾಗಿದೆ. ಮೋಟೋ G9 ಪವರ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 662 SoC ಪ್ರೊಸೆಸರ್ ಚೀಪ್ ಸೆಟ್ ಅನ್ನು ಅಳವಡಿಸಲಾಗಿದೆ, ಮತ್ತು ಈ ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ,  ಫೋಟೋಗಳನ್ನು ತೆಗೆಯಲು ಮತ್ತು ವೀಡಿಯೊಗಳ ರೆಕಾರ್ಡಿಂಗ್ ಸೌಲಭ್ಯಕ್ಕಾಗಿ ಎಫ್ / 1.79 ಲೆನ್ಸ್ ಹೊಂದಿರುವ 64 ಮೆಗಾಪಿಕ್ಸೆಲಗಳ ಪ್ರಾಥಮಿಕ ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ, 2 ಮೆಗಾಪಿಕ್ಸೆಲಗಳ ಎಫ್ / 2.4 ಮ್ಯಾಕ್ರೋ ಲೆನ್ಸ್ ಹೊಂದಿರುವ  ಸೆಕೆಂಡರಿ ಸೆನ್ಸಾರ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲಗಳ ಎಫ್ / 2.4  ವೈಡ್ ಲೆನ್ಸ್  ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆ ಮಾಡುವುದಕ್ಕಾಗಿ ಮೋಟೋ ಜಿ 9 ಪವರ್ ಮುಂಭಾಗದಲ್ಲಿ 16 ಮೆಗಾಪಿಕ್ಸೆಲಗಳ ಕ್ಯಾಮೆರಾವಿದೆ. 

ಮೋಟೋ ಜಿ 9 ಪವರ್ 128 ಜಿಬಿ ಆಂತರಿಕ ಮೆಮೋರಿ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಜೊತೆಗೆ  ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 512 ಜಿಬಿ ವರೆಗೆ ಮೆಮೋರಿ ಶೇಖರಣಾ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇನ್ನು ಕನೆಕ್ಟಿವಿಟಿ ವಿಷಯದಲ್ಲಿ 4G LTE, ವೈ-ಫೈ 802.11 ಎಸಿ, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಎನ್‌ಎಫ್‌ಸಿ, ಸಂಪರ್ಕ ವೈಶಿಷ್ಟ್ಯತೆಯನ್ನು ಮೋಟೋ ಜಿ 9 ಪವರ್ ಸ್ಮಾರ್ಟ್ ಫೋನ್ ಒಳಗೊಂಡಿದೆ, ಹಾಗೂ ಚಾರ್ಜಿಂಗ್ ಪೋರ್ಟ್ ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಫೋನಿನ ಲಾಕ್ ಮತ್ತು ಅನಲಾಕಗಾಗಿ ಫೋನ್ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ. 

ಮೊಟೊರೊಲಾ G9 ಪವರ್ 6000 mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮಾಡುವುದಕ್ಕಾಗಿ 20W ಚಾರ್ಜಿಂಗ್ ಅಡಾಪ್ಟರ್ ಅನ್ನು ಬಾಕ್ಸ್ ನಲ್ಲಿ ನೀಡಲಾಗುತ್ತದೆ. ಇದಲ್ಲದೆ ಫೋನ್ 172.14x76.79x9.66mm ಅಳತೆ ಮತ್ತು 221 ಗ್ರಾಂ ತೂಕವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು