Ticker

6/recent/ticker-posts

Advertisement

Paytm ಪೋಸ್ಟ್‌ಪೇಯ್ಡ್: ಬಳಕೆದಾರರು ತಮ್ಮ ಒಟ್ಟು ಖರ್ಚುಗಳನ್ನು ಕಸ್ಟಮೈಸ್ ಮಾಡಿದ EMI ಗಳಾಗಿ ಪರಿವರ್ತಿಸಬಹುದು.

ಪೇಟಿಎಂ ಪೋಸ್ಟ್‌ಪೇಯ್ಡ್ ಬಳಕೆದಾರರು ಈಗ ತಮ್ಮ ಮಾಸಿಕ ಖರ್ಚುಗಳನ್ನು ಇಎಂಐಗಳಾಗಿ ಪರಿವರ್ತಿಸಿ ಪಾವತಿಸುವ ಆಯ್ಕೆಯನ್ನು ಪರಿಚಯಿಸಿದ ಪೇಟಿಎಂ.

 
Paytm Postpaid

ಪೇಟಿಎಂ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಪೇಟಿಎಂ ಒಂದು ವಿಶಿಷ್ಟ ಯೋಜನೆ ಒಂದನ್ನು ಪರಿಚಯಿಸುತ್ತಿದೆ, ಪೇಟಿಎಂ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಈಗ ತಮ್ಮ ಬಾಕಿ ಇರುವ ಮೊತ್ತವನ್ನು ಈಕ್ವೆಟೆಡ್ ಮಾಸಿಕ ಕಂತುಗಳಲ್ಲಿ (ಇಎಂಐ) ಆಯ್ಕೆಯಲ್ಲಿ ಮರುಪಾವತಿಸಬಹುದು ಎಂದು ಕಂಪನಿ ಪ್ರಕಟಿಸಿದೆ. Paytm ತನ್ನ  ಬಳಕೆದಾರರಿಗೆ ಶಾಪಿಂಗನ ಉತ್ತಮವಾದ ಹೊಸ ಅನುಭವವನ್ನು ನೀಡಲು ಈ ಯೋಜನೆಯನ್ನು ಜಾರಿಗೆ ತಂದಿದೆ, ಮತ್ತು ಇದು ವಿವಿಧ ವಿಭಾಗಗಳಲ್ಲಿ ಲಭ್ಯವಿದೆ. ಇಎಂಐ ವೈಶಿಷ್ಟ್ಯವು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ತಮ್ಮ ಒಟ್ಟು ಖರ್ಚುಗಳನ್ನು ಕಸ್ಟಮೈಸ್ ಮಾಡಿದ ಇಎಂಐಗಳಾಗಿ, ಪರಿವರ್ತಿಸಿ ಅತ್ಯಲ್ಪ ಬಡ್ಡಿದರದಲ್ಲಿ ಮರುಪಾವತಿಸಲು ಅನುವು ಮಾಡಿಕೊಡುತ್ತದೆ. 

ಪೋಸ್ಟ್ ಪೇಯ್ಡ್ ಸೇವೆ ಲೈಟ್, ಡಿಲೈಟ್ ಮತ್ತು ಎಲೈಟ್ ಎಂಬ ಮೂರು ವಿಭಿನ್ನ ವಿಭಾಗಗಳಲ್ಲಿ ಲಭ್ಯವಿದೆ. ಪೋಸ್ಟ್‌ಪೇಯ್ಡ್ ಲೈಟ್ ರೂ. 20,000, ಡೆಲೈಟ್ ಮತ್ತು ಎಲೈಟ್ ರೂ. 1,00,000 ಮಾಸಿಕ ಖರ್ಚು. ಡಿಲೈಟ್ ಮತ್ತು ಎಲೈಟ್ ವಿಭಾಗಗಳೊಂದಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ. ಕ್ರೆಡಿಟ್ ಸ್ಕೋರ್ ಇಲ್ಲದ ಬಳಕೆದಾರರಿಗೆ ತ್ವರಿತ ಕ್ರೆಡಿಟ್ ಅನುಕೂಲತೆ ಮತ್ತು ಪ್ರಯೋಜನಗಳನ್ನು ಪಡೆಯಲು ಪೇಟಿಎಂ ಲೈಟ್ ಉತ್ತಮ ಆಯ್ಕಯಾಗಿದೆ. ಬಳಕೆದಾರರು ತಮ್ಮ ಖರ್ಚುಗಳನ್ನು ಪತ್ತೆಹಚ್ಚಲು ಪ್ರತಿ ತಿಂಗಳು ಒಂದೇ ಬಿಲ್ ನೀಡಲಾಗುವುದು.  
ಪೋಸ್ಟ್‌ಪೇಯ್ಡ್ ಬಿಲ್ ಅನ್ನು ಯುಪಿಐ, ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಸೇರಿದಂತೆ ಅನೇಕ ಪಾವತಿ ಆಯ್ಕೆಗಳ ಮೂಲಕ ಮರುಪಾವತಿಸಬಹುದು.

ಪೇಟಿಎಂ ಪೋಸ್ಟ್‌ಪೇಯ್ಡ್ ಸೇವೆಯನ್ನು ಪೇಟಿಎಂ ನ Android POS ಸಾಧನಗಳೊಂದಿಗೆ ಸಂಯೋಜಿಸುವ ಪ್ರಕ್ರಿಯೆಯಲ್ಲಿದೆ. ಪೇಟಿಎಂ ನಲ್ಲಿ ರೀಚಾರ್ಜ್ ಮತ್ತು ಬಿಲ್ ಪಾವತಿ ಮತ್ತು ಇಂಟರ್ನೆಟ್ ಅಪ್ಲಿಕೇಶನ್‌ಗಳಲ್ಲಿ ಆನ್‌ಲೈನ್ ಪಾವತಿಗಳಿಗಾಗಿ ಈ ಸೇವೆ ಈಗಾಗಲೇ ಲಭ್ಯವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು